ಸೇವಾ ನಿಯಮಗಳು

Google ("ಸೇವೆ") ಒದಗಿಸುವ ಚಾಟ್ ವೈಶಿಷ್ಟ್ಯಗಳನ್ನು ಬಳಸುವ ಮೂಲಕ, ನೀವು ಇವುಗಳಿಗೆ ಬದ್ಧರಾಗಿರಲು ಸಮ್ಮತಿಸುತ್ತೀರಿ ಮತ್ತು ಸ್ವೀಕರಿಸುತ್ತೀರಿ:Google ಸೇವಾ ನಿಯಮಗಳು, Google ಗೌಪ್ಯತಾ ಕಾರ್ಯನೀತಿ, ಹಾಗೂ ಈ ಹೆಚ್ಚುವರಿ ನಿಯಮಗಳು (ಒಟ್ಟಾರೆಯಾಗಿ "ಸೇವಾ ನಿಯಮಗಳು"). ಚಾಟ್ ವೈಶಿಷ್ಟ್ಯಗಳು ಟೆಲಿಫೋನ್ ಸಂಖ್ಯೆಗಳೊಂದಿಗೆ ಕಾರ್ಯನಿರ್ವಹಿಸುವುದರಿಂದ, ಆ ಟೆಲಿಫೋನ್ ಸಂಖ್ಯೆಗಳನ್ನು ತಲುಪಲು ಅವುಗಳು ಇತರ ಸೇವೆ ಒದಗಿಸುವವರ ಮೂಲಕ ಹೋಗಬಹುದು. ಚಾಟ್ ವೈಶಿಷ್ಟ್ಯ ಸಾಮರ್ಥ್ಯದ ಸೇವೆ ಒದಗಿಸುವಿಕೆಗಾಗಿ ನಿಮ್ಮ ಸಂಪರ್ಕಗಳನ್ನು ಸಾಂದರ್ಭಿಕವಾಗಿ ಪರಿಶೀಲಿಸಬಹುದು ಎಂಬುದನ್ನು ನೀವು ಒಪ್ಪುತ್ತೀರಿ. ನಿಮ್ಮ ಟೆಲಿಫೋನ್ ಸಂಖ್ಯೆಯನ್ನು ಪರಿಶೀಲಿಸಲು ಮತ್ತು ಸೇವೆಯನ್ನು ಒದಗಿಸಲು, ಸಾಧನ ಗುರುತಿಸುವಿಕೆಗಳು ಅಥವಾ ಸಿಮ್ ಕಾರ್ಡ್ ಮಾಹಿತಿಯನ್ನು ಒಳಗೊಂಡಂತೆ, ನಿಮ್ಮ ಸಾಧನ ಮಾಹಿತಿಯನ್ನು Google ಕೆಲವೊಮ್ಮೆ ನಿಮ್ಮ ವಾಹಕದೊಂದಿಗೆ ವಿನಿಮಯ ಮಾಡಿಕೊಳ್ಳಬಹುದು. ನಿಮ್ಮ ವಾಹಕದ ಮೂಲಕ ಒದಗಿಸಲಾದ ವೈಶಿಷ್ಟ್ಯಗಳು ಮತ್ತು ಸೇವೆಗಳಿಗೆ ಈ ಸೇವಾ ನಿಯಮಗಳು ಅನ್ವಯವಾಗುವುದಿಲ್ಲ (ಉದಾ., ಎಸ್‌ಎಂಎಸ್/ಎಂಎಂಎಸ್‌ ಇತ್ಯಾದಿ ಸೇರಿದಂತೆ ವಾಹಕ ಕರೆ ಮಾಡುವಿಕೆ ಮತ್ತು ಸಂದೇಶ ಕಳುಹಿಸುವಿಕೆ.). ನಿಮ್ಮ ಸಂದೇಶ ಕಳುಹಿಸುವಿಕೆ ಅಪ್ಲಿಕೇಶನ್‌ನ ಸೆಟ್ಟಿಂಗ್‌ಗಳಲ್ಲಿ ಸೇವೆಯನ್ನು ಆಫ್ ಮಾಡುವ ಮೂಲಕ ನಿಮ್ಮ ಸೇವೆಯ ಬಳಕೆಯನ್ನು ನೀವು ನಿಲ್ಲಿಸಬಹುದು.

ಈ ಸೇವೆಯನ್ನು Google LLC ಯ ಅಂಗಸಂಸ್ಥೆಯಾದ Jibe Mobile, Inc. ಮೂಲಕ ಒದಗಿಸಲಾಗಿದೆ.